Tuesday 28 July 2009

ದೇವರು-೨

ಬರಿಯ ವರ್ತನೆ ಭಾವನೆ ನಡತೆಗಳೇ ಮನುಷ್ಯ..

ಹೊಸ ಚಿಗುರು ಹೊಸ ಮೊಗ್ಗು ಹೊಸ ಹೂ ಅಸ್ತಿತ್ವದ ಕೊಡುಗೆ.
ಪ್ರೇಮಕ್ಕೆ ಕಾರಣ ಬೇಡ
ಪ್ರೇಮಕ್ಕೆ ಇತಿಯೂ ಇಲ್ಲ ಮಿತಿಯೂ ಇಲ್ಲ..

ಎಲ್ಲ ಪದ ಪ್ರಶ್ನೆಗಳು ಕರಗಿ ಆವಿಯಾದ ನಂತರ ಉಳಿಯುವ ರಹಸ್ಯ ವಿಸ್ಮಯ ಪರಮಾತ್ಮ.
ಒಂದೊಂದು ಅಣುವಿನಲ್ಲೂ ಎಲೆ ಎಲೆಯಲ್ಲೂ ಅಲೆಅಲೆಯಲ್ಲೂ ಮೊದದಲ್ಲೂ ನಂತರದಲ್ಲೂ ಪ್ರಶ್ನಾರ್ಥಕ ಚಿಹ್ನೆ.
ಇಲ್ಲೇ ಈಗಲೇ ಸತ್ತು ಬಿದ್ದಿರುವ ದೇವರನ್ನು ಇನ್ನೆಲ್ಲಿ ಹುಡುಕಲಿ..

ಅಲೆ ಅಲೆಗಳಲಿ ಆಲಿಸಬೇಕು ಅಸ್ತಿತ್ವದ ಅಸಲು.
ಬೆಳೆಸಿಕೊ ಗುಲಾಬಿಯನ್ನು ನಿನ್ನೊಳಗೆ ಯಾಕೆ ಕೀಳುತ್ತಿರುವೆ ಹೊರಗೆ ಇರುವುದನ್ನು..
ಭಗವಂತ ಸೃಷ್ಟಿಸಿದುದರಲ್ಲಿ ಇಲ್ಲಿ ಎಲ್ಲಿ ಬಿರುಕುಯೋನಿ ಇಲ್ಲ..

ಕಾರಣದಲ್ಲಿ ಕಾವ್ಯ ಅರಳುವುದು
ಹೂವಿನಂತೆ

ಪ್ರತಿ ಮಾನವನು
ತನ್ನದೇ ಪರಿಪೂರ್ಣ ಜೀವನದ ಪ್ರತೀಕ

ಎಲ್ಲದರಲ್ಲೂ
ಅದರದ್ದೇ ಅದೊಂದು ನಿಗೂಡತೆ ಗರ್ಭಿತ

ನಿಸರ್ಗದ ಕಣಕಣದಲ್ಲೂ
ನಿಸರ್ಗದ್ದೇ ಶಕ್ತಿ ತಾಣಗಳು ಮಾನಗಳು

ಒಂದು ಹನಿ ಇಬ್ಬನಿಯಲ್ಲಿ ಇಡಿಯ ವಿಶ್ವ
ಗೋಳದಲ್ಲಿ ತಿರುಗುವುದು

ನಮ್ಮ ಒಳಗಿನ ಆತ್ಮ ಒಂದು ಬಾವನೆಯಾದರೆ
ಹೊರಗೆ ಅದೊಂದು ನ್ಯಾಯ

ಪಾಚಿಯಲ್ಲೂ ಬಲೆಯಲ್ಲೂ ಸರ್ವಾಂತರ್ಯಾಮಿತ್ವದ ವಿಸ್ತೃತ ಜಾಲವಿದೆ
ಕಾಣುವ ಕಣ್ಣು ಇದೆ

ಎಲ್ಲ ಬಿಂದುಗಳಲ್ಲೂ ವಿಶ್ವದ ಮೌಲ್ಯವು
ಹುದುಗಿದ್ದೇ

ಒಳ್ಳೆಯದಿದೆಯೋ
ಕೆಟ್ಟದ್ದೂ ಇದ್ದೇ ಇದೆ

ಆತ್ಮೀಯತೆಯಲ್ಲಿ ದೂರವಿದೆ ವಿಸ್ತಾರವಿದೆ
ಪ್ರೇಮದಲ್ಲಿ ತಲ್ಲೀನತೆ ಇದೆ

ಸನಾತನ ಪ್ರಕಾಶ ನನಗೂ ಅಲ್ಲ ನಿನಗೂ ಅಲ್ಲ
ಎಲ್ಲರಿಗೂ ಸೇರಿದ್ದು

ಪಾರಮಾರ್ಥಿಕದಲ್ಲಿ ತೃಪ್ತರಾಗಿ ಬಿಡುವುದು
ಆತ್ಮಘಾತಕ

ಮೊಳಕೆ ಅಂಧಕಾರದಲ್ಲಿಯೇ
ಬೆಳಕನ್ನು ಸಹಿಸದು

ಬಿಜವೇಕೆ ಗೂಢವಾಗಿ ಭೂಮಿಯೊಳಗೆ
ಮೊಳೆಯುವುದು ಬೆಳೆಯುವುದು

ಪರಮಾತ್ಮನೆಲ್ಲಿ ನಡೆಯುತ್ತಾನೆ
ಅವನೋ ನರ್ತಿಸುತ್ತಾನೆ ಹಾಡುಗಬ್ಬವಾಡುತ್ತಾನೆ

ರಹಸ್ಯದರ್ಶಿ ಖಾಲಿ ಬಿದಿರಿನ ಕೊಳಲು

ತಾಯಿ ಯಾರು ತಾಯಿತನವೇನು
ಇದನ್ನಾರು ಹೇಳಬೇಕು ಇದರಲ್ಲರು ಇರಬೇಕು

ದೇವಾಲಯದಲ್ಲಿರುವ ವಿಗ್ರಹವೊಂದು ದರ್ಪಣವೆಂದು
ನಮ್ಮಂತೆ ನಿಮ್ಮಂತೆ

ಎಲ್ಲೆಂದರಲ್ಲಿ ಹಾರಲಾಗದ ವಿಮಾನಕ್ಕಿಂತ ಒಂದು ಹಕ್ಕಿ ಚಂದ
ಇದರ ಕೃತಿಕಾರನಿನ್ನೆಷ್ಟು ಚಂದವಾಗಿರಬಹುದೋ ಕಾಣಲೂ ಸಿಗೋಲ್ಲ
ಎಣಿಸಿಕೊಂಡರೂ ಬರೋಲ್ಲ

No comments:

Post a Comment