Tuesday 28 July 2009

ದೇವರು-೪

ಪರಮಾತ್ಮನ ಹೊರಗೆ ಇರಲು ಕೊದಿ
ಸ್ವಲ್ಪ ಸಮಯ ಸ್ವಲ್ಪ ಸ್ಥಾನ ಸೌಲಭ್ಯ

ಸಾಗರದ ಮೀನು
ಎಂದು ಕಳಕೊಂಡೀತು ಸಾಗರವನ್ನು

ಕಳೆದುಕೊಂಡುದನು
ಕನಸಿನಲು
ಹಾಗೆಯೇ ನಾವು ಕಾಣುವೆವು ಪರಮಾತ್ಮನನು ಎಚ್ಚರದಲ್ಲವೇಕೋ

ಯಾವ ಅಲೆಗಳೂ ನಮ್ಮನ್ನೆಸೆಯಲಾರವು ಪರಮಾತ್ಮಸಾಗರದಲಿ
ಬೆಸ್ತನೂ ಇಲ್ಲ ತಟವೂ ಇಲ್ಲ

ಈ ಮೂರ್ಛೆ ಈ ಭ್ರಮೆ ಕಳೆದರೆ
ಉಳಿಯುವುದೇನು ಪರಮಾತ್ಮ

ಬೇರೆಬೇರೆಯಾಗಿ ಪರಮಾತ್ಮನನ್ನು ಕಾಣುವ ಕಣ್ಣುಗಳಿಗೆ
ಪರಮಾತ್ಮ ನಿಜಕ್ಕೂ ಕಂಡಿರುವನೇನು?

ಅಜ್ಞಾತ ಪರಮಾತ್ಮನ ತಿಳಿಯಲು
ಆ ವಿಚಾರವೇ ಮಾರ್ಗ

ನಿಸ್ತರಂಗ ದರ್ಪಣದ
ಮೇಲಿನ ಪ್ರತಿಬಿಂಬ ಪರಮಾತ್ಮ

ದನ್ಯತಾಭಾವದ ಮೋಡಗಳಿಲ್ಲವಾದರೆ
ಮಳೆಯಾದರೂ ಎಂದು ಸುರಿದೀತು

ನಿಮ್ಮ ಭಾಷೆಯಿಂದ
ಅಸ್ತಿತ್ವಕ್ಕೇನು ಆಗಬೇಕಾದ್ದಿದೆ

ಹುಲ್ಲುಕಡ್ಡಿಯೊಂದು ಅದಾವುದೋ ತಾರೆಯೊಂದಿಗೆ
ಸಲ್ಲಾಪಿಸುವುದನ್ನು ಕಂಡೆ

ಅಘಾತದಂತೆ ಸುರಿಯುತ್ತಿದೆ
ಪರಮಾತ್ಮನ ಅನುಕಂಪ
ಸಾಗರವನ್ನೂ ನೋಡಲಾಗದಂತೆ
ನಾವೂ ಕುರುಡರಂತೆ

ಯಾವಾಗಲೂ ಚಿಂತೆ
ನಮಗೆ ಅವನದೇ
ಅವನಿಗೋ ನಮ್ಮದೇ
ಅದೇ ಧರ್ಮ

ದ್ರುವಗಳಲ್ಲಿ ಹೆಪ್ಪುಗಟ್ಟಿ
ಸಾಗರದಲ್ಲಿ ನೀರು ನೀರಾಗಿ
ಮೋಡದಲ್ಲಿ ಹನಿಹನಿಯಾಗಿ
ಅಲ್ಲಿರುವವನಾರಲ್ಲಿ


ಈ ಅಸ್ತಿತ್ವದಿಂದಲೇ ಉಂಡು
ಈ ಅಸ್ತಿತ್ವವನ್ನೇ ಒಂದು ದಿನ ಸೇರುವ
ನಮಗೇಕೆ ಇದರ ಮೇಲಿಲ್ಲ ಪ್ರೇಮ

ಪ್ರೇಮದಿಂದ ಮಾಡಿದ್ದು ಧಾರ್ಮಿಕತೆಯಿಂದಾದರೆ
ಭಯದಿಂದ ಮಾಡಿದ್ದೆಲ್ಲವೂ ಅಧಾರ್ಮಿಕತೆ ಅಲ್ಲವೇನು

ಬೊಬ್ಬೆ ಹಾಕಬೇಡಿ
ದಮ್ಮಯ್ಯ ಕಿವುಡನಲ್ಲ ಆತ
ಕೇಳಿ ಕೇಳಿ ಆತನೇ
ಕಳೆಯುತ್ತಿದ್ದಾನೆ ಸಾರಿ ಸಾರಿ

ಕೊಡು ಕೊಡು ಎಂದು ಸಾವಿರ ಸಾರಿ
ಬೇಡಿದರೂ ಕೊಡಲೊಲ್ಲದ ದೇವ
ತೆಗೋ ಎಂದಂತಾದಾಗ
ಬಡತನ ನೀಗೀತು
ಸಿರಿತನ ಬೆಳಗಿತ್ತು ಪಡೆದು ಪಡೆದು

ಸಾಗರದಲ್ಲಿ ಮೀನು
ನೀರನ್ನು ಎಷ್ಟಾದರೂ ಹುಡುಕೀತೋ

No comments:

Post a Comment